• September 17, 2019

ಮನುಜನ ಪ್ರತಿ ಅಂಗಾಂಗಗಳಿಗೆ ಚಲನ ವಲನ ನಿಡುವ ರಕ್ತದ ಒಂದೊಂದು ಹನಿ ಹನಿಗೂ ಒಂದೊಂದು ಪ್ರಾಣದಷ್ಟು ಬೆಲೆಯಿದೆ ಆ ಬೆಲೆ ಯನ್ನು ಸಮನಾಗಿ ಇರುವುದು ರಕ್ತದಾನ ಕ್ಕೆ ಮಾತ್ರ …

Post by Sandeep shanivarasante
ಮೈಸೂರು, ಜೂನ್ 14: ಪ್ರತೀ ಮನುಷ್ಯನ ದೇಹದಾದ್ಯಂತ ಸಂಚರಿಸಿ, ಆತನ ಜೀವವನ್ನು ಹಿಡಿದಿಟ್ಟಿರುವ ಆ ಕೆಂಪು ದ್ರವ ಕೇವಲ ಹಿಂಸೆಯ ಸಂಕೇತವಷ್ಟೇ ಅಲ್ಲ, ಅದು ಪ್ರಾಣ ಉಳಿಸುವ ಜೀವದ್ರವವೂ ಹೌದು. ರಕ್ತ ಕಂಡೊಡನೆ ಹಲವರಿಗೆ ತಲೆ ಸುತ್ತುತ್ತದೆ, ಕಣ್ಣು ಮಸುಕಾಗುತ್ತದೆ. ಆದರೆ ಅದೇ ರಕ್ತವೇ ನಮ್ಮೆಲ್ಲ ದೇಹದ ತುಂಬೆಲ್ಲಾ ತುಂಬಿಕೊಂಡು ನಮ್ಮನ್ನು ರಕ್ಷಿಸುತ್ತಿದೆ ಎಂಬುದು ನೆನಪಾದರೆ ರಕ್ತದ ಮಹತ್ವವೇನು ಎಂಬುದು ಅರ್ಥವಾಗುತ್ತದೆ.

ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮತ್ತು ರಕ್ತದಾನ ಮಾಡಿ ಪರರ ಪ್ರಾಣ ಉಳಿಸಿದ ದಾನಿಗಳಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ್ 14 ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜನರು ರಕ್ತದಾನದ ಕುರಿತು ಅರಿವು ಮೂಡಿಸುವ ಮೂಲಕ ಮತ್ತು ರಕ್ತದಾನ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2004 ರಲ್ಲಿ ಆರಂಭವಾದ ಈ ಆಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಆಚರಿಸಿಕೊಂಡದು ಬರುತ್ತಿವೆ.
ಈಗಲೇ ದಾನಮಾಡಿ, ಮತ್ತೆ ಮತ್ತೆ ದಾನಮಾಡುತ್ತಿರಿ) ಇದು, ಈ ಬಾರಿಯ ರಕ್ತದಾನ ದಿನದ ಘೋಷ ವಾಕ್ಯ. ರಕ್ತದಾನದ ಕುರಿತು ಇಂದಿಗೂ ಹಲವರಲ್ಲಿ ತಪ್ಪುಕಲ್ಪನೆಗಳಿವೆ.

ರಕ್ತದಾನ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ, ಅಥವಾ ಅಶಕ್ತತೆ ಕಾಡುತ್ತದೆ… ಇತ್ಯಾದಿ, ಇತ್ಯಾದಿ. ಆದರೆ ಇದ್ಯಾವುದೂ ಸತ್ಯವಲ್ಲ. ರಕ್ತ ನಮ್ಮ ದೇಹದ ಒಟ್ಟು ತೂಕದ ಶೇ.7 ಪ್ರತಿಶತ ಮಾತ್ರ ಇರುತ್ತದೆ. ಭಾರತದಲ್ಲಿ ಸದ್ಯಕ್ಕೆ ಶೇ. 9 ರಷ್ಟು ರಕ್ತದ ಕೊರತೆಯಿದೆ.

P0mAKzmMFt

Read Previous

ಮಹಾರಾಷ್ಟ್ರ: 4 ತಿಂಗಳಲ್ಲಿ 808 ರೈತರ ಆತ್ಮಹತ್ಯೆ!

Read Next

ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್ ದಾಖಲು

Leave a Reply

Your email address will not be published. Required fields are marked *