• September 17, 2019

ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್ ದಾಖಲು

Post by.Sandeep Shanivarasante
ಕನ್ನಡ ಖ್ಯಾತ ನಟ ಯಶ್ ಬಾಡಿಗೆ ಮನೆ ಗಲಾಟೆ ಮುಗಿಯುತ್ತದೆ ಎನ್ನುವಾಗಲೇ ಮತ್ತೆ ಹೆಚ್ಚಾಗಿದೆ. ಯಶ್ ತಾಯಿ ಪುಷ್ಪಾ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಹೈಕೋರ್ಟ್ ಆದೇಶದಂತೆ ಜೂನ್ 6 ರಂದು ನಟ ಯಶ್ ಕುಟುಂಬ ಬಾಡಿಗೆ ಮನೆಯನ್ನು ಖಾಲಿ ಮಾಡಿದೆ. ಆದರೆ, ಆ ಸಮಯದಲ್ಲಿ ಮನೆಯ ವಸ್ತುಗಳನ್ನು ಹಾನಿ ಮಾಡಿದೆ ಎಂದು ಮನೆ ಮಾಲೀಕರು ಆರೋಪ ಮಾಡಿದ್ದರು. ಮನೆಯಲ್ಲಿ ಇದ್ದ ಲೈಟ್, ಬಾಗಿಲು, ಪೂಜಾ ಕೊಠಡಿ, ಫ್ಯಾನ್, ಡೆಕೋರೇಷನ್ ಲ್ಯಾಂಪ್ ಸೇರಿದಂತೆ ಅನೇಕ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.
ಮುಗಿಯದ ಬಾಡಿಗೆ ಮನೆ ವಿವಾದ : ಯಶ್ ತಾಯಿ ವಿರುದ್ಧ ದೂರು ನೀಡಿದ ಮನೆ ಮಾಲಿಕ
ಬನಶಂಕರಿ 3ನೇ ಹಂತದಲ್ಲಿರುವ ಮನೆಯ ಮಾಲೀಕರಾದ ಡಾ.ವನಜಾ 2010ರ ಅಕ್ಟೋಬರ್ 11 ರಂದು ತಮ್ಮ ಮನೆಯನ್ನು ಯಶ್ ತಾಯಿ ಪುಷ್ಪಾ ಅವರಿಗೆ ನೀಡಿದ್ದರು. ಆದರೆ, ಬಾಡಿಗೆ ಪಾವತಿ ಸರಿಯಾಗಿ ಮಾಡದ ಕಾರಣ ಮನೆ ಮಾಲೀಕರು ನ್ಯಾಯಾಲಯದ ಮೊರೆ ಹೋದರು. ಏಳು ವರ್ಷಗಳ ಕಾಲ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು, ಮನೆ ಖಾಲಿ ಮಾಡುವಂತೆ ಆದೇಶ ನೀಡಲಾಗಿತ್ತು.

ಮನೆ ಖಾಲಿ ಮಾಡುವ ಸಮಯದಲ್ಲಿ ಮನೆಯ ವಸ್ತುಗಳ ಮೇಲೆ ಹಾನಿ ಮಾಡಿದ್ದಾರೆ ಎಂದು ಮಾಲೀಕರಾದ ಡಾ.ವನಜಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ವಿರುದ್ಧ ಐಪಿಸಿ ಕಲಂ 427 ಅಡಿ ಕೇಸ್‌ ದಾಖಲಾಗಿದ್ದು, ಯಶ್ ತಾಯಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಅದೃಷ್ಟದ ಮನೆ ಎನ್ನುವ ಮೋಹ ಈಗ ಯಶ್ ಕುಟುಂಬವನ್ನು ಪೊಲೀಸ್ ಠಾಣೆ, ಕೋರ್ಟ್‌ ಅಲೆಯುವ ಹಾಗೆ ಮಾಡಿದೆ.

#Myasorematters

P0mAKzmMFt

Read Previous

ಮನುಜನ ಪ್ರತಿ ಅಂಗಾಂಗಗಳಿಗೆ ಚಲನ ವಲನ ನಿಡುವ ರಕ್ತದ ಒಂದೊಂದು ಹನಿ ಹನಿಗೂ ಒಂದೊಂದು ಪ್ರಾಣದಷ್ಟು ಬೆಲೆಯಿದೆ ಆ ಬೆಲೆ ಯನ್ನು ಸಮನಾಗಿ ಇರುವುದು ರಕ್ತದಾನ ಕ್ಕೆ ಮಾತ್ರ …

Read Next

ನಿರಂತರ ಒತ್ತಡ ದ ಜೀವನ ಮದುಮೆಹಕ್ಕೆ ಆಹ್ವಾನ ಡಾಕ್ಟರ್ ರೇಣುಕಾಪ್ರಸಾದ್ …

Leave a Reply

Your email address will not be published. Required fields are marked *