• October 22, 2019

HDKಯಿಂದ 30 ಕೋಟಿಗೆ ಬೇಡಿಕೆ : ಬಿಜೆಪಿ ನಾಯಕ ಸ್ಫೋಟಕ ಹೇಳಿಕೆ

HIGHLIGHTS

ರಾಜ್ಯ ರಾಜಕಾರಣದ ಹೈ ಡ್ರಾಮಾ ಮುಂದುವರಿದಿದೆ. ರಾಜೀನಾಮೆ ಪರ್ವ ನಡೆಯುತ್ತಿದ್ದು, ಇದೀಗ ಬಿಜೆಪಿ ಮುಖಂಡರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

Post sandeep shanivarasante

ವಿಜಯಪುರ [ಜು.09] : ರಾಜ್ಯ ರಾಜಕೀಯ ಸ್ಥಿತಿಗತಿ ಕ್ಷಣ ಕ್ಷಣವೂ ಬದಲಾವಣೆಯಾಗುತ್ತಿದೆ. ರಾಜೀನಾಮೆ ಮುಂದುವರಿದಿದೆ. ರಾಜೀನಾಮೆ ನೀಡಿದ ಶಾಸಕರಿಗೆ ಬಿಜೆಪಿಯಿಂದ ಹಣದ ಆಫರ್ ನೀಡಲಾಗಿದೆ ಎನ್ನುವ ಆರೋಪಕ್ಕೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ. 

ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ ಎನ್ನುವ ಸಿಎಂ ಆರೋಪದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ  ಪಾಟೀಲ್, ನಾನೂ ಜೆಡಿಎಸ್ ನಲ್ಲಿ ಇದ್ದಾಗ  ಕುಮಾರಸ್ವಾಮಿ ನನಗೂ 30 ಕೋಟಿ ರು.ಬೇಡಿಕೆ ಇಟ್ಟಿದ್ದರು. 

MLC ಮಾಡಲು ನನ್ನ ಕಾರ್ಯಕರ್ತರ ಬಳಿ ಬಳಿ ಹಣ ನೀಡಬೇಕಾಗುತ್ತದೆ ಎಂದು ಕೇಳಿದ್ದರು. ಕುಮಾರಸ್ವಾಮಿ ಅವರೇನು ಸತ್ಯ ಹರಿಶ್ಚಂದ್ರನಲ್ಲ. ಬಿಜೆಪಿ ನಾಯಕರ ಹೆಸರು ಕೆಡಿಸಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. 

ಇನ್ನು ಅಂದು ಸಿಎಂ ಕುಮಾರಸ್ವಾಮಿ ನಮ್ಮ ಕಾರ್ಯಕರ್ತರ ಬಳಿ ಹಣ ಕೇಳಿದ್ದನ್ನ ಕಾಂಗ್ರೆಸ್ ನಾಯಕರು ಆಡಿಯೋ ಮಾಡಿದ್ದರು. ಅದನ್ನು ಕಾಂಗ್ರೆಸ್ ನಾಯಕರೇ ಆಡಿಯೋ ಮಾಡಿದ್ದರು. ಅದನ್ನು ಕಾಂಗ್ರೆಸ್ ನಾಯಕರೇ ಸೀಡಿಯನ್ನೂ ಮಾಡಿದ್ದರು. ಅವರಿಗೆ ನಾಚಿಕೆ ಎನ್ನುವುದೇ ಇಲ್ಲವೆಂದು ವಿಜು ಗೌಡ ಪಾಟೀಲ್ ಹೇಳಿದರು.

P0mAKzmMFt

Read Previous

ವಿಶ್ವಕಪ್ ಮೊದಲ ಸೆಮಿಫೈನಲ್: ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

Read Next

ದೆಹಲಿಯಲ್ಲಿ ಸತತ ಮೂರು ಭಾರಿ ಮುಖ್ಯ ಮಂತ್ರಿ ಯಾಗಿ ಸೇವೆ ಸಲ್ಲಿಸಿದ ಶೀಲಾ ದೀಕ್ಷಿತ್ ರವರಿಗೆ. ಭಾವಪೂರ್ಣ ಶ್ರದ್ಧಾಂಜಲಿ ..

Leave a Reply

Your email address will not be published. Required fields are marked *