• April 1, 2020
  • Last Update February 14, 2020 11:46 pm
  • Australia

Blog

Uncategorized

ವರ್ಷಗಳುರುಳಿದರೂ ಚೇತರಿಸಿಕೊಳ್ಳದ ಕೊಡಗು; ಆತಂಕದಲ್ಲಿ ಮುಳುಗಿದ ಕಾಫಿ ಬೆಳೆಗಾರರು

ಕಳೆದ ವರ್ಷದಲ್ಲಿ ಸಂಭವಿಸಿದ ಗುಡ್ಡ ಕುಸಿತ, ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕಾಫಿ ನಾಡು ಕೊಡಗು ಇನ್ನೂ ಚೇತರಿಸಿಕೊಂಡಿಲ್ಲ. ಹವಾಮಾನ ವೈಪರಿತ್ಯ ಕೊಟ್ಟಿರುವ ಹೊಡೆತ ಇಡೀ ಕೊಡಗನ್ನು ಮೇಲೆಳೆದಂತೆ ಮಲಗಿಸಿಬಿಟ್ಟಿದೆ. ಕಾಫಿ ಬೆಳೆಯಲ್ಲಿ ಲಾಭದೊರಯದಕಾರಣ ಕರಿಮೆಣಸು ಬೆಳೆಯಿಂದ ಬರುವ ಆದಾಯವನ್ನು ನೆಚ್ಚಿಕೊಂಡಿದ್ದ ಇಲ್ಲಿನ ಬೆಳೆಗಾರರಿಗೆ, ಕರಿಮೆಣಸಿನ ಬೆಲೆ ಕುಸಿತಕ್ಕೊಳಗಾಗಿರುವುದು ಇನ್ನಷ್ಟು ಆಘಾತಕ್ಕೊಳಗಾಗಿಸಿದೆ ಸುಮಾರು ‎4,102 (ಚ ಕಿ ಮೀ) ಭೂ ಪ್ರದೇಶ ಹೊಂದಿರುವ ಕೊಡಗು ಅತಿ ಮಳೆ ಬೀಳುವ ಗುಡ್ಡಗಾಡು ಪ್ರದೇಶವೂ ಹೌದು. ಭತ್ತ, ಕಾಫಿ, ಕರಿಮೆಣಸು ಬೆಳೆ ಇಲ್ಲಿನ ಆರ್ಥಿಕತೆಯ ಒಂದು ಭಾಗ. ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿ ಮಾಡಲು ವಾತಾವರಣವೂ ಅನುಕೂಲಕವಾಗಿಲ್ಲ. ಕೆಲವೆಡೆ ರೈತರು ದೈನಂದಿನ ಜೀವನಕ್ಕೆ ಭತ್ತವನ್ನು ಬೆಳೆಯುತ್ತಿರುವುದನ್ನು ಬಿಟ್ಟರೆ ಬಹುತೇಕ ರೈತರು ಭತ್ತವನ್ನು ಕೈಬಿಟ್ಟಿದ್ದಾರೆ. ಪ್ರೋತ್ಸಾಹ ಧನವೂ ಸಕಾಲಕ್ಕೆ ದೊರೆಯದಿರುವುದು ಇದಕ್ಕೆ  ಕಾರಣ ಇರಬಹುದು. ಸದ್ಯ, ಕಾಫಿ ಬೆಳೆಯೂ ಭತ್ತದ ದಾರಿಯನ್ನೇ ಹಿಂಬಾಲಿಸಿದೆ. ಕಾಫಿ ಬೆಳೆಗಾರರು ಹೊರ ಜಗತ್ತಿಗೆ ಸಿರಿವಂತರು. ಆದರೀಗ ಅವರ ಪರಿಸ್ಥಿತಿಯೂ ಮೊದಲಿನಂತಿಲ್ಲ. ಕಾಫಿ ಈಗ ಇಲ್ಲಿನ ಬೆಳೆಗಾರರ ಕೈಯನ್ನು ಸುಟ್ಟು ಹಾಕಿದೆ. ಕಾಫಿ ಕೊಯ್ಲು ಆರಂಭವಾಗಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಕಾಫಿ ಇಳವರಿ ಸಿಗುವುದು ಅನುಮಾನ. ಕಳೆದ ವರ್ಷದಲ್ಲಿ ಸುರಿದ ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕಾಫಿ ಬೀಜ ನೆಲಕ್ಕುರುಳಿವೆ. ಈ ಹಿಂದಿನ ವರ್ಷಗಳಲ್ಲಿ ಕಾಫಿ ಇಂತಹ ಸ್ಥಿತಿ ತಲುಪಿರಲಿಲ್ಲ. ಕಾಫಿ ಗಿಡಗಳು ಶ್ವೇತ ಸುಂದರಿಯಂತೆ ಕಾಣಿಸುತ್ತಿದ್ದ ಆ ಮನೋಹರ ದೃಶ್ಯ, ಸೌಂದರ್ಯವೇ ಬೇರೆ. ಇಂತಹ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಪ್ರವಾಸಿಗರು ಕೂಡ ಕೊಡಗನ್ನು ಇನ್ನಷ್ಟು ಚಲನಶೀಲವಾಗಿಸುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆ ಇದೆ. ಕಳೆದ ಕೆಲ ವರ್ಷಗಳಿಂದ ಕೊಡಗಿನಲ್ಲಿ ಹೂ ಮಳೆಯೇ ಇಲ್ಲ. ಹೀಗಾಗಿ ಕಾಫಿ ಬೆಳೆಗಾರರು ಸಂಕಷ್ಟದ ಸುಳಿಯಲ್ಲಿದ್ದಾರೆ. ಕಾಫಿ ಬೆಳೆಯುವ ಪ್ರದೇಶದ ಸುತ್ತಮುತ್ತ ಸುಮಾರು 2 ರಿಂದ 3 ಇಂಚು ಮಳೆ ಸತತ 4 ಗಂಟೆವರೆಗೆ ಸುರಿಯಬೇಕು. ಆದರೆ ವಾಡಿಕೆಯಂತೆ ಹೂ ಮಳೆ ಸುರಿಯುತ್ತಿಲ್ಲ. ಇದು ಒಟ್ಟಾರೆ ಕಾಫಿ ಇಳುವರಿಯನ್ನೇ ಬುಡಮೇಲು ಮಾಡಿದೆ. ಇದು ಹವಾಮಾನ ವೈಪರಿತ್ಯದಿಂದಾಗಿರುವ ನೇರ ಪರಿಣಾಮ. ಇನ್ನು ನಶಿಸುತ್ತಿರುವ ಜೇನಿನ ಸಂತತಿಯೂ ಕೂಡ ಕಾಫಿ ಬೆಳೆಗೆ ತೀವ್ರತರವಾದ ಹೊಡೆತ ಕೊಟ್ಟಿದೆ. ಕಾಫಿ ಹೂ ಅರಳಿದ ನಂತರ   ಸಹಜವಾಗಿ ಪರಾಗಸ್ಪರ್ಶ ನಡೆಯಬೇಕು. ಕಾಫಿ ಬೆಳೆಯಲ್ಲಿ ಪರಾಗಸ್ಪರ್ಶದ ಒಂದು ಮುಖ್ಯ ಪ್ರಕ್ರಿಯೆ. ಪರಾಗಸ್ಪರ್ಶ, ಗಾಳಿ ಮತ್ತು ಕೀಟಗಳಿಂದ ನಡೆಯುವುದು ವಾಡಿಕೆ.

Read More
News

ಕ್ರೈಸ್ಟ್ ಮೀಡಿಯಾ ಫೆಸ್ಟ್ ಚಾಂಪಿಯನ್ಸ್

ಮೈಸೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ವಿಭಾಗದಿಂದ ಆಯೋಜಿಸಲಾಗಿದ್ದ ‘ಕ್ರೈಸ್ಟ್ ಮೀಡಿಯಾ ಫೆಸ್ಟ್ 2020’ಯಲ್ಲಿ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಗೆಲ್ಲುವುದರ ಜೊತೆಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮೊದಲನೆಯ ‘ಪ್ಯಾನಲ್ ಡಿಸ್ಕ್’ಷನ್’ ಸ್ಪರ್ಧೆಯಲ್ಲಿ ‘ಪ್ರಕೃತಿ ವಿಕೋಪ ಮತ್ತೋಮ್ಮೆ ಸಂಭವಿಸಿದರೇ?’ ಎಂಬ ವಿಷಯದ ಕುರಿತು ನ್ಯೂಸ್ ಚಾನೆಲ್ ತರಹದ ಚರ್ಚೆಯಲ್ಲಿ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಶ್ರೀವಲ್ಲಿ ರಟ್ಟೆಹಳ್ಳಿ ˌ ಸ್ವಾತಿ ಬಿ. ಎಸ್ ˌ ರಶ್ಮೀ […]

Read More
News

A ROMANTIC MELODY BY YOUNG MINDS OF MYSURU IN COLLABORATION WITH WEL-KNOWN SINGER VIDISHA VISHWAS

Twenty-eight-year-old passionate singer and composer Ahsish ganna , mysuru based singer has composed a melody named ‘ malebillu’ in collaboration with a well-known personality Vidisha vishwas , to bring out an independent kannada music video. Which going to be released tomorrow, Which is on 12th Of February, at 4pm on yopra music youtube channel by […]

Read More
News

ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಿದ್ದರಾಮಯ್ಯ!

ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಕೈಗೊಂಡಿರುವ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ಯಡಿಯೂರಪ್ಪ ಸರ್ಕಾರ 300 ಕೋಟಿ ರೂಪಾಯಿ ನೀಡಿದ್ದು ಇದು ಸರ್ಕಾರಕ್ಕೆ ಹೊರೆಯಾದ ವಿಚಿರವಾದರೂ  ಮಕ್ಕಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Read More
News

ರಾಜ್ಯ ಸರ್ಕಾರದ ಸಂಪುಟ ಸೇರಲಿರುವ ಸಂಭವನೀಯ ಸಚಿವರು

ಕಳೇದ ಎಷ್ಟೊ ತಿಂಗಳುಗಳಿಂದ ಸರ್ಕಾರದ ಸಂಪುಟ ವಿಸ್ತರಣೆಯ ಕಾರ್ಯ ಹಾಗೆ ಉಳಿದಿತ್ತು. ಈಗ ಅದಕ್ಕೆ ಸಮಯ ಒದಗಿ ಬಂದಿದೆ. 6 ರ ಗುರುವಾರ ಬೆಳಗ್ಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 11 ಮಂದಿ ಅರ್ಹ ಶಾಸಕರ ಪೈಕಿ 10 ಮಂದಿ ಯಡಿಯೂರಪ್ಪನವರ ಸಂಪುಟ ಸೇರಲಿದ್ದು, ಬಿಜೆಪಿಯ ಮೂವರು ಸಚಿವರಾಗಲಿದ್ದಾರೆ ಎಂದು ಹೇಳಲಾಗಿದೆ. ಸಂಭವನೀಯ ಸಚಿವರ ಪಟ್ಟಿ ಇಂತಿದ್ದು, ಉಮೇಶ್ ಕತ್ತಿ, ಸಿ.ಪಿ. ಯೋಗೀಶ್ವರ್, ಅರವಿಂದ ಲಿಂಬಾವಳಿ, […]

Read More
News

ಫ್ರೀ ಕಾಶ್ಮೀರ್ ಫಲಕ ಪ್ರದರ್ಶನದ ಯುವತಿ ಪರ ವಕಾಲತ್ತು ವಹಿಸಲಿದೆ ದ್ವಾರಕಾನಾಥ್ ತಂಡ

ಮೈಸೂರು, ಜನವರಿ 20: ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ “ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಬಾರದು ಎಂದು ಮೈಸೂರು ವಕೀಲರ ಸಂಘ ತಿರ್ಮಾನಿಸಿತ್ತು ಈಗ ದ್ವಾರಕನಾಥ್ ಮತ್ತು ತಂಡದವಲು ವಕಾಲತ್ತು ವಹಿಸಿಕೊಳ್ಳಲಿದ್ದು, “ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಯಾವುದೇ ಪ್ರಕರಣವನ್ನ ಪರಿಶೀಲನೆ ಮಾಡಿದ ನಂತರ ಸತ್ಯ ತಿಳಿಯುತ್ತದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೆ ಪ್ರಕರಣ […]

Read More
News

ಮೇಯರ್ ಆದ ಮೊದಲ ಮುಸ್ಲಿಂ ಮಹಿಳೆ: ಮೈಸೂರು

ಮೈಸೂರು(ಜ.18): ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ & ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ತಸ್ಲಿಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಎರಡೂ ಪಕ್ಷಗಳು ಮೈತ್ರಿ ಇರುವುದರಿಂದ ತಸ್ಲಿಮ್ ಸಲೀಸಾಗಿ ಮೇಯರ್ ಗದ್ದುಗೆ ಏರಿದ್ದಾರೆ. 47 ಮತ ಪಡೆದ ತಸ್ಲಿಮಾ ಅವರ ವಿಜಯದ  ಬಳಿಕ ಉಪ ಮೇಯರ್‌ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭಿಸಲಾಯಿತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯ ರ್ಥಿಯಾಗಿ ಸಿ.ಶ್ರೀಧರ್‌, ಬಿಜೆಪಿ ಅಭ್ಯರ್ಥಿಯಾಗಿ ಶಾಂತಮ್ಮ ನಾಮಪತ್ರ ಸಲ್ಲಿಸಿದರು. ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್‌ನ ಸಿ.ಶ್ರೀಧರ್‌ಗೆ 47 ಮತಗಳಿಸಿ ಉಪಮೇಯರ್‌ ಆಗಿ ಆಯ್ಕೆಯಾದರೆ, […]

Read More

ಮೈಸೂರು ಮಹಾನಗರ ಪಾಲಿಕೆ ಮೇಯರ್ & ಉಪಮೇಯರ್ ಚುನಾವಣೆ ಇಂದು

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆಯ ಚುನಾವಣೆ ಇಂದು ನಡೆಯಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ. ಮೈಸೂರು ಮಹಾನಗರ ಪಾಲಿಕೆ ನಂಬರ್ 29 ರ ಸದಸ್ಯೆ ತಸ್ಲಿಮ್ ಅವರನ್ನು ಮೈಸೂರು ಮೇಯರ್ ಆಗಿ ನೇಮಕ ಮಾಡಲು ಜೆಡಿಎಸ್ ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಜೊತೆಗೆ ವಾರ್ಡ್ ನಂಬರ್ 38 ರ ಕಾಂಗ್ರೆಸ್ ಸದಸ್ಯ ಶ್ರೀಧರ್ ಉಪ ಮೇಯರ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. Reported […]

Read More

ಮೈಸೂರು ಮಹಾನಗರ ಪಾಲಿಕೆ ಮೇಯರ್ & ಉಪಮೇಯರ್ ಚುನಾವಣೆ ಇಂದು

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಅಯ್ಕೆಯ ಚುನಾವಣೆ ಇಂದು ನಡೆಯಲಿದೆ . ಜೇ.ಡಿ.ಎಸ್ – ಕಾಂಗ್ರೇಸ್ ಮೈತ್ರಿ ಜೆಡಿಎಸ್​-ಕಾಂಗ್ರೆಸ್​​ ಮೈತ್ರಿಯಲ್ಲಿ ಮೇಯರ್​ ಆಯ್ಕೆಗೆ ನಿರ್ಧಾರ ಮಾಡಲಾಗಿದೆ. ಜೆಡಿಎಸ್​ ಮಹಿಳಾ ಅಭ್ಯರ್ಥಿ ತಸ್ನೀಮ್ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ತಸ್ನೀಮ್ ವಾರ್ಡ್ ನಂ 26ರ ಸದಸ್ಯೆಯಾಗಿದ್ದಾರೆ. ಜೊತೆಗೆ ವಾರ್ಡ್ ನಂಬರ್ 38 ರ ಕಾಂಗ್ರೆಸ್ ಸದಸ್ಯ ಶ್ರೀಧರ್ ಉಪ ಮೇಯರ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ವರದಿ […]

Read More

ಚಾರುಲತಾ ಪಟೇಲ್ ಇನ್ನಿಲ್ಲ!

ವಿಶ್ವಕಪ್ ವೇಳೆ ಭಾರತೀಯರ ಮನಗೆದ್ದ 87 ವರ್ಷದ ಚಾರುಲತಾ ಪಟೇಲ್ ನಿಧನರಾಗಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ.

Read More